Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಜಟಾಯು` ಮೊದಲ ಪ್ರತಿ ಸಿದ್ದ
Posted date: 26 Wed, Dec 2012 ? 09:13:05 AM

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿರುವ ‘ಜಟಾಯು’ ...ದಿ ರೆಬೆಲ್ ವಿತಿನ್ ಇದೀಗ ಸಂಪೂರ್ಣ ಚಿತ್ರೀಕರಣ ಹಾಗೂ ಚಿತ್ರಕ್ಕೆ ಬೇಕಾದ ದಿ.ಟಿ.ಎಸ್. ತಂತ್ರಜ್ಞಾನ ಲೇಪನ ಸಹ ಸಿದ್ದಮಾಡಿಕೊಂಡು ಮೊದಲ ಪ್ರತಿಯನ್ನು ಪಡೆದು ಕೊಳ್ಳುತ್ತಿದೆ. ಜನವರಿ ೯ ರಂದು ‘ಜಟಾಯು’ ಚಿತ್ರದ ಧ್ವನಿ ಸುರಿಳಿಯನ್ನು ಬಿಡುಗಡೆ ಮಾಡಿದ ನಂತರ  ಸೆನ್ಸಾರ್ ಮಂಡಳಿ ಮುಂದೆ ಬಂದು ಜನವರಿ ಅಂತ್ಯದಲ್ಲಿಯೇ ಚಿತ್ರ ಬಿಡುಗಡೆ ಮಾಡುವುದು ನಿರ್ಮಾಪಕ ಪ್ರಭಾಕರ ಅವರ ಹಂಬಲ.
ಮೊದಲು ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಿದ ನಂತರವೇ ತೆಲುಗು ಭಾಷೆಯಲ್ಲಿ ಬಿಡುಗಡೆ ಎಂದು ನಿರ್ಮಾಪಕರು. ಮೊದಲ ಚಿತ್ರದಲ್ಲಿ ಕೇವಲ ನಟನೆ ಅಷ್ಟೇ ಮಾಡಿದ್ದ ರಾಜ್ ಎರಡನೆಯ ಚಿತ್ರದಲ್ಲಿ ನಟ ಅಲ್ಲದೆ ನಿರ್ದೇಶಕನಾಗಿ ಬಡ್ತಿ ಪಡೆದು ‘ಜಟಾಯು’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ‘ಸಂಚಾರಿ’ ಸಿನೆಮಾದ ನಾಯಕ ‘ಜಟಾಯು’ ಚಿತ್ರದಲ್ಲಿ ನಿರ್ದೇಶಕರೂ ಆಗಿ ಪಕ್ಕಾ ವ್ಯಾಪಾರಿ ಸಿನೆಮಾದ ಜೊತೆ ಹೃದಯಂಗಮ ಸನ್ನಿವೇಶಗಳನ್ನು ಪೇರಿಸಿದ್ದಾರೆ.
ಈ ಚಿತ್ರ ಎಲ್ಲಿ ಪ್ರಾರಂಭ ಆಗುವುದೊ ಅದೇ ಸ್ಥಳದಲ್ಲಿ ಚಿತ್ರೀಕರಣ ಮುಗಿಸಿ ಅದು ತೆರೆಯ ಮೇಲೆ ಹಾಗೆಯೇ ಮೂಡಿಬರಲಿದೆ.
ಐದು ಸಾಹಸ ಸನ್ನಿವೇಶಗಳು  ಹಾಗೂ ಐದು ಸಾಹಸ ಒಳಗೊಂಡಿರುವ ‘ಜಟಾಯು’?. ದಿ ರೆಬೆಲ್ ವಿತಿನ್  ‘ಅಮೋಘ ಎಂಟೆರ್ಪೃಸೆಸ್’ ಚಿತ್ರ. ಬಿ. ಸುರೇಶ್ ಅವರ ಸಂಭಾಷಣೆ, ವಿನಯ್ ಚಂದ್ರ ಅವರ ಸಂಗೀತ, ಎಂ ಯು ನಂದಕುಮಾರ್ ಅವರ ಛಾಯಾಗ್ರಹಣ, ಕೆ ಎಂ ಪ್ರಕಾಷ್ ಅವರ ಸಂಕಲನ, ಹರ್ಷ, ಕಲೈ, ಮುರಳಿ, ರಾಮು ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಅವರ ಸಾಹಸ ‘ಜಟಾಯು’ ಚಿತ್ರಕ್ಕೆ ಇದೆ.
ನಾಯಕ ರಾಜ್ ಅವರಿಗೆ ಸುರಭಿ ಮತ್ತು ರೂಪಶ್ರೀ ನಾಯಕಿಯರು. ಅವಿನಾಷ್, ನಟರಾಜ್, ಬುಲ್ಲೆಟ್ ಪ್ರಕಾಷ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ದರಾಜ್ ಕಲ್ಯಂಕರ್, ಕುರುಪ್ ರಮೇಶ್ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಜಟಾಯು` ಮೊದಲ ಪ್ರತಿ ಸಿದ್ದ - Chitratara.com
Copyright 2009 chitratara.com Reproduction is forbidden unless authorized. All rights reserved.